ಅರ್ಜಿಗಳಿಗೆ ಆಹ್ವಾನ: ಐಎಫ್ಎ - ಮೈಸೂರು ಮಿತ್ರ ಸೃಜನಾತ್ಮಕ ಯೋಜನೆಗಳು । ಕೊನೆಯ ದಿನಾಂಕ: ಮಾರ್ಚ್ 07, 2022 (CLOSED)
ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಐಎಫ್ಎ) ಹಾಗೂ ಮೈಸೂರು ಮಿತ್ರ
ಜಂಟಿ ಸಹಯೋಗದೊಂದಿಗೆ
ಐಎಫ್ಎ ಕಾರ್ಯಗತಗೊಳಿಸುವ ಪತ್ರಾಗಾರ ಹಾಗೂ ಸಂಗ್ರಹಾಲಯ ಕಾರ್ಯಕ್ರಮದ ಅಡಿಯಲ್ಲಿ
ಎರಡು ಐಎಫ್ಎ-ಮೈಸೂರು ಮಿತ್ರ ಸೃಜನಾತ್ಮಕ ಯೋಜನೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸುತ್ತದೆ
ಈ ಮಾಹಿತಿಯನ್ನು ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಐಎಫ್ಎ ದ ಪತ್ರಾಗಾರ ಹಾಗೂ ಸಂಗ್ರಹಾಲಯ ಕಾರ್ಯಕ್ರಮವನ್ನು ಎರಡು ಉದ್ದೇಶಗಳಿಂದ ಪ್ರಾರಂಭಿಸಲಾಗಿದೆ. ಕಲಾ ಅಭ್ಯಾಸಕಾರರು ಮತ್ತು ಸಂಶೋಧಕರಿಗೆ ಪತ್ರಾಗಾರ ಹಾಗೂ ಸಂಗ್ರಹಾಲಯದ ಸಂಗ್ರಹಣೆಗಳೊ0ದಿಗೆ ಸಾರ್ವಜನಿಕವಾಗಿ ತೊಡಗಿಸಿಕೊಳ್ಳುವಿಕೆಗಾಗಿ ನವೀನ, ವಿಮರ್ಶಾತ್ಮಕ ಮತ್ತು ಸೃಜನಶೀಲ ವಿಧಾನಗಳನ್ನು ಸೃಷ್ಟಿಸಲು ಅವಕಾಶವನ್ನು ಒದಗಿಸುವುದು; ಮತ್ತು ಈ ಸ್ಥಳಗಳನ್ನು ಸಂವಾದ ಮತ್ತು ಉಪನ್ಯಾಸದ ವೇದಿಕೆಗಳಾಗಿ ಶಕ್ತಿಯುತಗೊಳಿಸುವುದು. ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ.
ಮೈಸೂರು ಮಿತ್ರ ಕುರಿತು:
ಮೈಸೂರು ಮಿತ್ರ ಕನ್ನಡದ ಜನಪ್ರಿಯ ಬೆಳಗಿನ ಪತ್ರಿಕೆ. ಈ ಪತ್ರಿಕೆಯನ್ನು ಅದರ ಸಹೋದರಿ ಪ್ರಕಟಣೆಯಾದ ಸ್ಟಾರ್ ಆಫ್ ಮೈಸೂರು, ಸಂಜೆ ಇಂಗ್ಲಿಷ್ ದಿನಪತ್ರಿಕೆಯೊಂದಿಗೆ ಅಕಾಡೆಮಿ ನ್ಯೂಸ್ಪೇಪರ್ಸ್ ಪ್ರೈವೇಟ್ ಲಿಮಿಟೆಡ್, ಮೈಸೂರು ಪ್ರಕಟಿಸಿದೆ. ಎರಡೂ ಪತ್ರಿಕೆಗಳನ್ನು ಕೆಬಿ ಗಣಪತಿ ಮತ್ತು ದಿವಂಗತ ಸಿಪಿ ಚಿನ್ನಪ್ಪರವರು ಸ್ಥಾಪಿಸಿದರು. ಸ್ಟಾರ್ ಆಫ್ ಮೈಸೂರು ಪತ್ರಿಕೆ ಪ್ರಾರಂಭವಾದ ಎರಡು ವರ್ಷಗಳ ನಂತರ ಅಂದರೆ 1980 ರಲ್ಲಿ ಮೈಸೂರು ಮಿತ್ರ ಪತ್ರಿಕೆಯನ್ನು ಪ್ರಾರಂಭಿಸಲಾಯಿತು.
ಮೈಸೂರು ಮಿತ್ರವು ಮೈಸೂರು ನಗರದ ಸುದ್ದಿಗಳನ್ನು ಒಳಗೊಂಡ ಸ್ಥಳೀಯ ಪತ್ರಿಕೆಯಾಗಿ ಪ್ರಾರಂಭವಾಯಿತು, ಆದರೆ ಈಗ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಮತ್ತು ಕೊಡಗು ಐದು ಜಿಲ್ಲೆಗಳನ್ನು ಒಳಗೊಂಡ ಪ್ರಾದೇಶಿಕ ಪತ್ರಿಕೆಯಾಗಿ ಬೆಳೆದಿದೆ. ಈ ಪತ್ರಿಕೆಯು ಸ್ಥಳೀಯ ರಾಜಕೀಯ, ಕಾಳಜಿಗಳು ಮತ್ತು ಕಾರ್ಯಕ್ರಮಗಳ ಆಳವಾದ ಪ್ರಸಾರಕ್ಕಾಗಿ ಹೆಸರುವಾಸಿಯಾಗಿದೆ. 2000 ಇಸವಿಯ ಆರಂಭಿಕ ವರ್ಷಗಳಲ್ಲಿ ಭಯಾನಕ ಕಳ್ಳ ಬೇಟೆಗಾರ ವೀರಪ್ಪನ್ನ ಹುಡುಕಾಟದ ವರದಿಗಾಗಿ ಪತ್ರಿಕೆ ಸ್ವತಃ ಹೆಸರು ಮಾಡಿತು ಮತ್ತು ಪ್ರಶಂಸೆಗಳನ್ನು ಪಡೆಯಿತು. ಸ್ಟಾರ್ ಆಫ್ ಮೈಸೂರಿನಂತೆ, ಮೈಸೂರು ಮಿತ್ರ ಕೂಡ ಯುವ ಪತ್ರಕರ್ತರ ಪ್ರತಿಭೆಗಳನ್ನು ಪೋಷಿಸಿದ್ದಾರೆ. ಈಗ, 43 ವರ್ಷಗಳ ನಂತರ, ಈ ಸ್ಥಳೀಯ ಪತ್ರಿಕೆಯು ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಓದುವ ಸ್ಥಳೀಯ ಪತ್ರಿಕೆಯಾಗಿದೆ.
ಮೈಸೂರು ಮಿತ್ರದಲ್ಲಿರುವ ಪತ್ರಾಗಾರದಲ್ಲಿ 1980 ರಿಂದ ಮುದ್ರಿಸಲಾದ ಭೌತಿಕ ಪತ್ರಿಕೆಗಳ ಪ್ರತಿಗಳು ಮತ್ತು ಆನ್ಲೈನ್ ಆವೃತ್ತಿಯ ಡಿಜಿಟಲ್ ಪ್ರತಿಗಳಿವೆ. ಈ ಪತ್ರಿಕೆಗಳು ಸ್ಥಳೀಯ ವಿಷಯ ಮತ್ತು ಚಿತ್ರಗಳೊಂದಿಗೆ ಸಮೃದ್ಧವಾಗಿವೆ ಮತ್ತು ನಗರ ಮತ್ತು ಅದರ ನೆರೆಯ ಜಿಲ್ಲೆಗಳ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಇತಿಹಾಸವನ್ನು ಓರೆಹಚ್ಚುತ್ತವೆ.
ಐಎಫ್ಎ-ಮೈಸೂರು ಮಿತ್ರ ಸೃಜನಾತ್ಮಕ ಯೋಜನೆಗಳ ಕುರಿತು:
ಐಎಫ್ಎ-ಮೈಸೂರು ಮಿತ್ರ ಸೃಜನಾತ್ಮಕ ಯೋಜನೆಗಳು ಯೋಜನಾ ಸಂಯೋಜಕರಿಗೆ ಒಂದು ವರ್ಷದ ಅವಧಿಯಲ್ಲಿ ಈ ಪತ್ರಾಗಾರದೊಂದಿಗೆ ತೊಡಗಿಸಿಕೊಳ್ಳಲು ಮತ್ತು ಸಂಶೋಧಿಸಲು ಅವಕಾಶವನ್ನು ನೀಡುತ್ತವೆ ಮತ್ತು ಯೋಜನೆಯ ಅವಧಿಯಲ್ಲಿ ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಪ್ರದರ್ಶನಗಳು, ಮಾತುಕತೆಗಳು, ಕಾರ್ಯಾಗಾರಗಳು ಇತ್ಯಾದಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ, ಇದನ್ನು ಐಎಫ್ಎ ಜಾರಿಗೊಳಿಸುತ್ತದೆ.
ಪತ್ರಿಕೆಯ ಪ್ರತಿಗಳನ್ನು ವೀಕ್ಷಿಸಲು, ದಯವಿಟ್ಟು ಭೇಟಿ ನೀಡಿ https://epaper.mysurumithra.com/
ಅರ್ಜಿದಾರರ ವಿವರ:
ನಾವು ಸಂಶೋಧನೆ ಮತ್ತು ಪತ್ರಾಗಾರ ಸಂಗ್ರಹಗಳೊ0ದಿಗೆ ಕೆಲಸ ಮಾಡುವಲ್ಲಿ ಬಲವಾದ ಆಸಕ್ತಿಯನ್ನು ಹೊಂದಿರುವ ಕ್ಯುರೇಟರ್ಗಳು, ದೃಶ್ಯ ಕಲಾವಿದರು, ಸಂಶೋಧಕರು, ಪತ್ರಕರ್ತರು, ಬರಹಗಾರರು, ಪ್ರದರ್ಶನಕಾರರು ಮತ್ತು ಇತರ ಸೃಜನಶೀಲ ವೃತ್ತಿಗಾರರಿಂದ ಅರ್ಜಿಗಳನ್ನು ನಿರೀಕ್ಷಿಸುತ್ತೇವೆ. ಅರ್ಜಿದಾರರು ತಮ್ಮ ಅಂತರಶಿಸ್ತೀಯ ಮತ್ತು ಸಹಯೋಗದ ವಿಧಾನಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ವಿಧಾನಗಳ ಮೂಲಕ ಯೋಚಿಸಲು ನಾವು ಪ್ರೋತ್ಸಾಹಿಸುತ್ತೇವೆ.
ಭಾರತೀಯ ಪ್ರಜೆಗಳಾಗಿರುವ ಕಲಾಭ್ಯಾಸಿಗಳು ಅರ್ಜಿ ಸಲ್ಲಿಸಲು ಅರ್ಹರು. ನಮ್ಮ ಅರ್ಹತಾ ಮಾನದಂಡಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ. ಯೋಜನಾ ಸಂಯೋಜಕರು ಯೋಜನೆಯ ಅವಧಿಯಲ್ಲಿ ಪತ್ರಾಗಾರದಲ್ಲಿ ಸಾಕಷ್ಟು ಸಮಯವನ್ನು ಕಳೆಯಬೇಕಾಗಿರುವುದರಿಂದ ಮೈಸೂರು ಮತ್ತು ನಗರಕ್ಕೆ ಸಮೀಪವಿರುವ ಸ್ಥಳಗಳ ಅರ್ಜಿದಾರರಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸಲು ಮಾರ್ಗಸೂಚಿಗಳು:
ನಿಮ್ಮ ಅರ್ಜಿ ಈ ಕೆಳಗಿನವುಗಳನ್ನು ಒಳಗೊಂಡಿರಬೇಕು:
- ಪತ್ರಾಗಾರದ ವಸ್ತುಗಳಿಂದ ಅಭಿವೃದ್ಧಿಪಡಿಸಬಹುದಾದ ಯೋಜನೆಯನ್ನು ಸಂಕ್ಷಿಪ್ತವಾಗಿ ವಿವರಿಸುವ ಪ್ರಸ್ತಾವನೆ. ಈ ವಿವರಣೆಯು ದರ್ಶನ, ವಿಧಾನ ಮತ್ತು ಸಂಭವನೀಯ ಫಲಿತಾಂಶಗಳನ್ನು ಒಳಗೊಂಡಿರಬೇಕು.
- ಪತ್ರಾಗಾರದ ಸಾಮಾಗ್ರಿಗಳಿಂದ ಅಭಿವೃದ್ಧಿಪಡಿಸಬಹುದಾದ ಸಾರ್ವಜನಿಕ ಕಾರ್ಯಕ್ರಮಗಳ ಕುರಿತು ಸಂಕ್ಷಿಪ್ತ ಟಿಪ್ಪಣಿ.
- ವಿವರವಾದ ಬಜೆಟ್.
- ಕಲಾ ಅಭ್ಯಾಸಿ ಅಥವಾ ಸಂಶೋಧಕರಾಗಿ ನೀವು ತೊಡಗಿಸಿಕೊಂಡಿರುವ ಯಾವುದಾದರೂ ಯೋಜನೆಯ ಸಂಕ್ಷಿಪ್ತ ವಿವರಣೆಯೊಂದಿಗೆ ನಿಮ್ಮ ಸಂಕ್ಷಿಪ್ತ ಪರಿಚಯ. ಈ ವಿವರಣೆಯು ಆ ಯೋಜನೆಯಿಂದ ಉಂಟಾದ ದರ್ಶನ, ವಿಧಾನ, ಪ್ರಕ್ರಿಯೆಗಳು ಮತ್ತು ಫಲಿತಾಂಶಗಳನ್ನು ಒಳಗೊಂಡಿರಬೇಕು. ದಯವಿಟ್ಟು ನಮಗೆ ಲಿಂಕ್ಗಳನ್ನು ಕಳುಹಿಸಿ ಮತ್ತು ಲಗತ್ತುಗಳನ್ನು ಅಲ್ಲ.
ಯೋಜನೆಯ ಆಯವ್ಯಯ:
- ಯೋಜನೆಯ ವೆಚ್ಚವು ರೂ 2,00,000/- ಮೀರಬಾರದು.
- ಯೋಜನೆಯ ಸಂಪೂರ್ಣ ಅವಧಿಗೆ ತಿಂಗಳಿಗೆ ರೂ 12,000/- ಗೌರವಧನದಂತೆ ರೂ 1,44,000/- ಮಿತಿಗೆ ಒಳಪಟ್ಟು ನೀವು ಆಯವ್ಯಯವನ್ನು ರೂಪಿಸಬಹುದು. ಒಟ್ಟು ಮೊತ್ತವು ಗೌರವಧನವನ್ನು ಒಳಗೊಂಡಿರುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
- ನಮ್ಮ ನಿಧಿಗಳು ಯೋಜನೆ-ಸಂಬ0ಧಿತ ವೆಚ್ಚಗಳು ಮತ್ತು ಚಟುವಟಿಕೆಗಳನ್ನು ಮಾತ್ರ ಒಳಗೊಂಡಿರುತ್ತವೆ ಮತ್ತು ಮೂಲಸೌಕರ್ಯ ವೆಚ್ಚಗಳು ಅಥವಾ ಸಲಕರಣೆಗಳ ಖರೀದಿಯ ವೆಚ್ಚಗಳನ್ನು ಪಾವತಿಸುವುದಿಲ್ಲ.
- ಪ್ರತಿಯೊಂದು ಆಯವ್ಯಯ ವಿಭಾಗವೂ ಯೋಜನಾ-ಸಂಬ0ಧಿತ ವೆಚ್ಚದ ನಿರ್ದಿಷ್ಟ ಅಂಶಕ್ಕೆ ಸಂಬ0ಧಿಸಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.
- ಐಎಫ್ಎ ಈ ಯೋಜನೆಯನ್ನು ನಿಮ್ಮೊಂದಿಗೆ ನೇರವಾಗಿ ಯೋಜನಾ ಸಂಯೋಜಕರಾಗಿ ಕಾರ್ಯಗತಗೊಳಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
ಪ್ರಮುಖ ದಿನಾಂಕಗಳು:
- ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ ಸೋಮವಾರ, ಮಾರ್ಚ್ 07, 2022.
- ಆಯ್ದ ಅಭ್ಯರ್ಥಿಗಳೊಂದಿಗೆ ಸಂದರ್ಶನಗಳು ಮಾರ್ಚ್ 2022 ರ ಆರಂಭದಲ್ಲಿ ನಡೆಯುವ ನಿರೀಕ್ಷೆಯಿದೆ.
- ಯೋಜನೆಯು ಮಾರ್ಚ್ 2022 ರ ಅಂತ್ಯದಲ್ಲಿ ಒಂದು ವರ್ಷದ ಅವಧಿಗೆ ಪ್ರಾರಂಭವಾಗುತ್ತದೆ.
ದಯವಿಟ್ಟು ಗಮನಿಸಿ, ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ನಾವು ಇಮೇಲ್ ಮೂಲಕ ಮಾತ್ರ ಅರ್ಜಿಗಳನ್ನು ಸ್ವೀಕರಿಸುತ್ತೇವೆ. ನಿಮ್ಮ ಅರ್ಜಿ ಅಥವಾ ಯಾವುದೇ ಪ್ರಶ್ನೆಗಳನ್ನು ಸುಮನ್ ಗೋಪಿನಾಥ್ ಅವರಿಗೆ suman@indiaifa.org ಗೆ ಇಮೇಲ್ ಮಾಡಿ.
ಗೋಥೆ-ಇನ್ಸ್ಟಿಟ್ಯೂಟ್ / ಮ್ಯಾಕ್ಸ್ ಮುಲ್ಲರ್ ಭವನ ನವದೆಹಲಿ ಇವರ ಬೆಂಬಲದೊ0ದಿಗೆ ಪತ್ರಾಗಾರ ಹಾಗೂ ಸಂಗ್ರಹಾಲಯ ಕಾರ್ಯಕ್ರಮವು ನಡೆಯುತ್ತದೆ.
To read the call in English, click here.